ವಿದ್ಯಾರ್ಥಿ ಸಂಘ ಮತ್ತು ವಿವಿಧ ವಿಷಯ ಸಂಘಗಳ ಉದ್ಘಾಟನಾ ಸಮಾರಂಭ

ವಿದ್ಯಾರ್ಥಿ ಸಂಘ ಮತ್ತು ವಿವಿಧ ವಿಷಯ ಸಂಘಗಳ ಉದ್ಘಾಟನಾ ಸಮಾರಂಭ

ಪ್ರತಿಭೆ ಎನ್ನುವುದು ಎಲ್ಲರಲ್ಲಿಯೂ ಸುಪ್ತವಾಗಿರುವಂತದ್ದು, ಅದಕ್ಕೊಂದು ಅವಕಾಶ ಸಿಕ್ಕಾಗ  ಅದು ಅರಳುತ್ತದೆ, ಬೆಳೆಯುತ್ತದೆ. ಪ್ರತಿಭೆ ಅನಾವರಣದಲ್ಲಿ ಅಹಂಕಾರ ಎನ್ನುವುದು ಮೊಳಕೆಯೊಡೆಯಕೂಡದು, ಪರಸ್ಪರ ಪ್ರತಿಭೆಯನ್ನು ಪ್ರೋತ್ಸಾಹಿಸುವ , ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು . ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ಅನಾವರಣಕ್ಕಾಗಿ ವಿವಿಧ ವಿಷಯ ಸಂಘಗಳ ಅಗತ್ಯವಿದೆ.